TOP

JUSTICE K. S HEGDE

Founder 1909 - 1990

ಸ್ಥಾಪಕರ ಬಗ್ಗೆ

ಜಸ್ಟೀಸ್ ಕೌಡೂರು ಸದಾನಂದ ಹೆಗ್ಡೆ (1909-1990)

ಜಸ್ಟೀಸ್ ಕೌಡೂರು ಸದಾನಂದ ಹೆಗ್ಡೆಯವರು ಕೌಡೂರು ಗ್ರಾಮದಲ್ಲಿ 1909ರ ಜೂನ್ 16ರಂದು ಜನ್ಮ ತಾಳಿದರು. ಇವರು ತಮ್ಮ ಶಿಕ್ಷಣವನ್ನು ಕಾರ್ಕಳ ಹಾಗೂ ಮಂಗಳೂರಿನಲ್ಲಿ ಆರಂಭಿಸಿ, ಮದ್ರಾಸ್ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಅರ್ಥಶಾಸ್ತ್ರದಲ್ಲಿ ಪದವಿ ಶಿಕ್ಷಣವನ್ನು ಪೂರೈಸಿ ಮದ್ರಾಸಿನ ಸರ್ಕಾರಿ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ಪಡೆದರು.

1936ರಲ್ಲಿ ಕಾರ್ಕಳದಲ್ಲಿ ವಕೀಲ ವೃತ್ತಿಯನ್ನು ಪ್ರಾರಂಭಿಸಿದ ಇವರು ನಂತರ ಮಂಗಳೂರಿಗೆ ತೆರಳಿ ಜಿಲ್ಲೆಯ ಪಬ್ಲಿಕ್ ಪ್ರಾಸಿಕ್ಯೂಟರ್ಸ್ ಆಗಿ 1948ರಲ್ಲಿ ನಿಯೋಜಿತರಾದರು. ಇವರು (ರಾಜ್ಯ ಸಭಾ ಸದಸ್ಯರಾಗಿ) ಮೊದಲ ಕೌನ್ಸಿಲ್ ಆಫ್ ಸ್ಟೇಟ್ ನ ಸದಸ್ಯರಾಗಿ ಆಯ್ಕೆಯಾದರು. 1954ರಲ್ಲಿ ಇವರು ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಗೆ ಭಾರತವನ್ನು ಪ್ರತಿನಿಧಿಸಿದ್ದರು. ಬಳಿಕ ಇವರು ಮೈಸೂರು ಹೈಕೋರ್ಟಿನ ನ್ಯಾಯಾಧೀಶರಾಗಿ ನಿಯೋಜಿತರಾದರು. 1966ರಲ್ಲಿ ದೆಹಲಿ ಹಾಗೂ ಹಿಮಾಚಲದ ಪ್ರದೇಶದ ಪ್ರಥಮ ಮುಖ್ಯ ನ್ಯಾಯಾಧೀಶರಾಗಿ ನೇಮಕಗೊಂಡರು. 1967ರಲ್ಲಿ ಭಾರತದ ಸುಪ್ರೀಂಕೋರ್ಟ್ ನ ನ್ಯಾಯಾಧೀಶರಾದರು.

ಪ್ರಾಮಾಣಿಕವಾದ ಹಾಗೂ ಸದೃಡವಾದ ಮೌಲ್ಯಗಳನ್ನು ರೂಢಿಸಿಕೊಂಡಿದ್ದ ಜಸ್ಟೀಸ್ ಕೆ.ಎಸ್. ಹೆಗ್ಡೆ 1973ರಲ್ಲಿ ಸುಪ್ರಿಂ ಕೋರ್ಟಿನ ನ್ಯಾಯಾಧೀಶರ ನೇಮಕದಲ್ಲಿ ಹಿರಿಯ ನ್ಯಾಯಮೂರ್ತಿಗಳ ಅವಗಣನೆಗಾಗಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದರು. ಇವರು 1977ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದರು. 1980ರಂಚಿನಲ್ಲಿ ಲೋಕಸಭಾ ಸ್ಪೀಕರ್ ಆಗಿ ಆಯ್ಕೆಯಾದರು.

ವಿಶಿಷ್ಟವಾದ ವೃತ್ತಿ ಬದುಕಿನ ನಿವೃತ್ತಿಯ ತರುವಾಯ ನಿಟ್ಟೆಯಲ್ಲಿ ನೆಲೆಸಿ, ಗ್ರಾಮೀಣ ಜನರ ಪ್ರಗತಿ ಹಾಗೂ ಸಕ್ರೀಯ ಗೊಳಿಸುವಲ್ಲಿ ಅವಿರತವಾಗಿ ಶ್ರಮಿಸಿದರು. ಶ್ರೀಯುತರು 25 ಮೇ 1990ರಲ್ಲಿ ಸ್ವರ್ಗಸ್ಥರಾದರು.

ABOUT THE FOUNDER

Justice Kowdoor Sadananda Hegde (1909 – 1990)

Born in Kowdoor village on June 16, 1909, Kowdoor Sadananda Hegde had his early education at Karkala and Mangaluru. Thereafter, he obtained a degree in Economics from the Presidency College in Madras and a degree in Law from the Government Law College, Madras.

He began his legal practice at Karkala in 1936 and later moved to Mangaluru, where he was appointed Public Prosecutor of South Canara district in 1948. He was elected Member of the First Council of States (now known as the Rajya Sabha).

In 1954, he represented India at the General Assembly of the United Nations. He then, became a Judge of the Mysore High Court. In 1966, he was appointed the first Chief Justice of the Delhi and Himachal Pradesh High Court. He held this office till he was elevated to the post of Judge of the Supreme Court of India in 1967.

A man of integrity and strong values, Justice K S Hegde resigned from the post of Chief Justice in 1973, in protest against the supercession of senior judges in the appointment of the Chief Justice of India. In 1977, he won the election to the Lok Sabha and was elected Speaker of the Lok Sabha, an office he held till 1980.

After a distinguished career, he retired from public life and settled at Nitte, only to relentlessly work for the upliftment and empowerment of the rural people. Justice K S Hegde passed away on May 25, 1990.