CDTP Program | Nitte Rukmini Adyanthaya Memorial Polytechnic


ನಿಟ್ಟೆ ರುಕ್ಮಿಣಿ ಅಡ್ಯಂತಾಯ ಸ್ಮಾರಕ ಪಾಲಿಟೆಕ್ನಿಕ್ (ಅನುದಾನಿತ), ನಿಟ್ಟೆ - ಸಿ. ಡಿ. ಟಿ. ಪಿ. ಕಾರ್ಯಕ್ರಮ

ಎನ್.ಆರ್.ಎ.ಎಂ. ಪಾಲಿಟೆಕ್ನಿಕ್ ಕಾಲೇಜು, ಸಮುದಾಯ ಅಭಿವೃದ್ಧಿಯನ್ನು ಬೆಂಬಲಿಸುತ್ತದೆ. ನಾವು ಸಿ. ಡಿ. ಟಿ. ಪಿ. ಯೋಜನೆಯ ಮೂಲಕ ವಿವಿಧ ಕ್ಷೇತ್ರಗಳ ಅಭಿವೃದ್ಧಿ ಚಟುವಟಿಕೆಗಳನ್ನು ಡೆಲ್ಲಿಯ ಎಮ್‌. ಹೆಚ್. ಆರ್. ಡಿ. ಮೂಲಕ ಕೈಗೆತ್ತಿಕೊಳ್ಳುತ್ತಿದ್ದೇವೆ. ನಿಟ್ಟೆಯನ್ನು ಕೇಂದ್ರವಾಗಿಟ್ಟುಕೊಂಡು ಈ ಯೋಜನೆಯನ್ನು ಉಡುಪಿ ಜಿಲ್ಲೆಯಾದ್ಯಂತ ವಿಸ್ತರಿಸಲಿದ್ದೇವೆ. ಪ್ರಸ್ತುತ ತಾಲ್ಲೂಕಿನ ಕಾರ್ಕಳ, ಬಜಗೋಳಿ, ಮುಂಡ್ಕೂರು, ಬೈಲೂರು, ಹಿರ್ಗಾನ, ಹಿರಿಯಡ್ಕ, ಕಡಾರಿಗಳಲ್ಲಿ ವಿಸ್ತೃತ ಕೇಂದ್ರಗಳು ಕಾರ್ಯೋನ್ಮುಖವಾಗಿದೆ.

ತಾಂತ್ರಿಕ ಹಾಗೂ ತಾಂತ್ರಿಕೇತರ ಕೋರ್ಸುಗಳಾದ ಕಂಪ್ಯೂಟರ್ ಆಧಾರಿತ ಲೆಕ್ಕ ಶಾಸ್ತ್ರ, ಕಂಪ್ಯೂಟರ್ ಹಾರ್ಡ್ ವೇರ್, ನೆಟ್ ವರ್ಕಿಂಗ್, ಸಿ.ಎನ್.ಸಿ. ತರಬೇತಿ, ಟೈಲರಿಂಗ್, ವಸ್ತ್ರವಿನ್ಯಾಸ, ಕಸೂತಿ, ಅಲಂಕಾರಿಕೆ, ಆಭರಣ ತಯಾರಿ, ಫ್ಯಾಷನ್ ವಿನ್ಯಾಸ, ಯಂತ್ರಗಾರಿಕೆ ತರಬೇತಿ, ಕಂಪ್ಯೂಟರ್ ಮೂಲ ಶಿಕ್ಷಣ ಅತ್ಯಾಧುನಿಕ ವಿದ್ಯುನ್ಮಾನ ಉಪಕರಣ ಮಾಹಿತಿ ಮೊದಲಾದವುಗಳ ಕುರಿತು ಈ ಕೇಂದ್ರಗಳಲ್ಲಿ ಪ್ರಧಾನಕೇಂದ್ರದ ಮೂಲಕ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿದೆ. ಒಟ್ಟು ಸುಮಾರು 509 ಮಂದಿ ತರಬೇತಿಗಳಲ್ಲಿ ಭಾಗವಹಿಸಿ

2017ರ ಮಾರ್ಚ್ ಅಂತ್ಯಕ್ಕೆ ತರಬೇತಿ ಪಡೆದಿರುತ್ತಾರೆ. ಸುಮಾರು 600 ಮಂದಿ ಬೇರೆ ಬೇರೆ ಇನ್ನಿತರ ತರಬೇತಿ ಪಡೆಯುತ್ತಿದ್ದಾರೆ. ತರಬೇತಿ ಕಾರ್ಯ ಕ್ರಮದ ಜೊತೆಗೆ ಸಿ. ಡಿ. ಟಿ. ಪಿ. ಯು ಸೌರ ಉದ್ಯಮ ಅಭಿವೃದ್ಧಿ ಕಾರ್ಯಕ್ರಮಗಳು ಹಾಗೂ ರಾಷ್ಟ್ರ ಹಾಗೂ ರಾಜ್ಯ ಸರಕಾರಗಳಿಂದ ಈ ಕೇಂದ್ರಗಳಲ್ಲಿ ದೊರೆಯುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಲಾಗುತ್ತಿದೆ.

ಆಭರಣ ತಯಾರಿಕಾ ತರಬೇತಿ ಸಮಾರೋಪ ಸಮಾರಂಭ ಕಾರ್ಕಳದ ಕೇಂದ್ರದಲ್ಲಿ ಶ್ರೀ ಚಂದ್ರಹಾಸ ಸುವರ್ಣ ಅಧ್ಯಕ್ಷತೆ ಹಾಗೂ ಸದಸ್ಯರು ಉಪನ್ಯಾಸಕ ಶ್ರೀ ರಾಘವೇಂದ್ರ ಭಟ್ ಇವರ ಉಪಸ್ಥಿತಿಯಲ್ಲಿ ನಡೆಯಿತು.NRAM Polytechnic supports the development of community. We have taken up development activities in different areas through the CDTP Scheme sponsored by MHRD, Delhi maintaining Nitte as a the main Centre. The activities of this Scheme extend up to Udupi. Presently we have extension centre at Karkala, Bajagoli, Mundkur, Bailoor, Hirgana, Hiriyadka and Kadari.

The Technical and Non-Technical Courses like Computer based Accountancy, Computer Hardware Networking, CNC Training, Tailoring and Dress Design, Embroidery, Beautician, Jewellery Making, Fashion Design, Machine Shop Training, Basic Computer Awareness, Advance Electronic Equipments, Etc., are given in the these extension centres along with the main centre Nitte. A total of 509 participants have been trained up to March 2017 in this academic year, and nearly 600 participants are taking training in different streams.

Along with the training programmes, the CDTP unit Conducted awareness Programmes and Dissemination of appropriate Technology of Solar Energy Utilization, Entrepreneurship Development Programme and different schemes of State and Central Govt. at different extension Centres.


Valedictory function of Jewellery making at Karkala Centre presided by Mr. Chandrahas Suvarna and Mr. Raghavendra Bhat, Lecturer in NRAM Polytechnic was the chief guest.

nitte